About me..
ನಮಸ್ತೆ
ನನ್ನ ಹುಟ್ಟೂರು "ಪುಣಚ", ಎನ್ನುವ ಒಂದು ದೊಡ್ಡ ಗ್ರಾಮ. ಇದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದೆ. ನನ್ನ ಪ್ರಾಥ್ರಮಿಕ ಶಾಲಾ ವಿದ್ಯಾಭ್ಯಾಸವನ್ನು ನಾನು ಇದೇ ಊರಿನಲ್ಲಿ ಮಾಡಿರುವೆ. ನಂತರ ನನ್ನ ಪಿ.ಯು.ಸಿ ವಿದ್ಯಾಭ್ಯಾಸವನ್ನು ಇಲ್ಲೇ ಪಕ್ಕದಲ್ಲಿರುವ "ಪುತ್ತೂರು" ಎಂಬ ಪಟ್ಟಣದಲ್ಲಿ ಮಾಡಿರುವೆ. ಇನ್ನು ನನ್ನ ಇಂಜಿನಿಯರಿಂಗ್ ಪದವಿಯನ್ನು "ಸುಳ್ಯ" ಎಂಬ ಪಟ್ಟಣದಲ್ಲಿ ಮಾಡಿರುವೆ.
ಇನ್ನು ನನ್ನ ಬಾಲ್ಯದ ಕೆಲವು ಸಿಹಿ-ಕಹಿ ತುಣುಕುಗಳು ಈ ಕೆಳಗಿನಂತಿವೆ :
- ನಾನು ನನ್ನ ಶಾಲಾ ದಿನಗಳಲ್ಲಿ , ನಮ್ಮ ಅಡಿಕೆ-ತೆಂಗು ಹಾಗು ಗದ್ದೆಯಲ್ಲಿ ಕೃಷಿ ಮಾಡುವುದನ್ನು ಸಹ ಕಲಿತುಕೊಂಡೆ. ಅಂದರೆ ನನಗೆ ಈಗಲೂ ಸಹ ತೆಂಗಿನ ಮರ ಹತ್ತಲು ಸರ ಸರನೆ ಬರುತ್ತೆ !
- ನನಗೆ ಗಣಿತ ಅಂದರೆ ಸಾಕು ತುಂಬಾ ಇಷ್ಟ ಆಗುತಿತ್ತು . ನಾನು ಲೆಕ್ಕದಲ್ಲಿ ಅಗ್ರಸ್ಥಾನದಲ್ಲಿದ್ದೆ.
- ನನಗೆ ವಿಜ್ಞಾನ ಮತ್ತು ಗಣಿತದಲ್ಲಿ ಉತ್ಸಾಹ ತುಂಬಿದವರೆಂದರೆ ನನ್ನ ತಂದೆ - ತಾಯಿ, ಶ್ರೀ ಜಯರಾಮ ಮಾಸ್ಟರ್ , ಶ್ರೀಮತಿ ರಾಜೀವಿ ಟೀಚರ್, ಶ್ರೀ ರಾಮಚಂದ್ರ ಭಟ್, ಶ್ರೀ ಹರಿಕೃಷ್ಣ ಭಟ್, ಹಾಗು ಶ್ರೀಮತಿ ಪ್ರೇಮಲತಾ. ಇವರೆಲ್ಲರೂ ನನ್ನ ಜೀವನದ ಅಡಿಗಲ್ಲು ಹಾಕಲು ತುಂಬ ಸಹಕರಿಸಿದ್ದಾರೆ ಹಾಗು ಒಳ್ಳೆಯ ದಾರಿ ತೋರಿಸಿಕೊಟ್ಟಿದ್ದಾರೆ.
- ...



0 Comments:
Post a Comment
Subscribe to Post Comments [Atom]
<< Home